ಮಳೆ ನೀರಿನಿಂದ ಬತ್ತಿದ ಬೋರ್ ವೆಲ್ ಗೆ ಮರುಜೀವ ನೀಡಿ ,ಜಲ ಸಮಸ್ಯೆ ನಿವಾರಣೆ ಬಗ್ಗೆ ಸಾಕ್ಷ ಚಿತ್ರಕ್ಕೆ ಜಲತಜ್ಞರಾದ ಡಾ||ದೇವರಾಜ್ ರೆಡ್ಡಿರವರಿಗೆ ರಾಷ್ಟೀಯ ಪುರಸ್ಕಾರ.

ಕೇಂದ್ರ ಸರ್ಕಾರದ ಮಿನಿಟ್ಟ್ರ್ ಆಫ್ ವಾಟರ್ ರೀಸೋರ್ಸಸ್ ಮತ್ತು ರೀವರ್ ಡೆವಲ್ ಮೆಂಟ್ ಗಂಗಾ ರಿಜುವೆನೇಷನ್ ವತಿಯಿಂದ ಆಯೋಜಿಸಲಾಗಿದ್ದ “ಜಲ ಬಚವೋ ,ವೀಡಿಯೋ ಬನಾವೋ ,ಪುರಸ್ಕಾರ ಪಾವೋ “ಸ್ಪರ್ಥೆಯಲ್ಲಿ 2.50ಲಕ್ಷ ಸ್ಪರ್ಥಿಗಳು ಭಾರತಾದ್ಯಾಂತ ಭಾಗವಹಿಸಿದ್ದರು .ನೀರು ಉಳಿಸುವ ಬಗ್ಗೆ 7ನಿಮಿಷದ ವೀಡಿಯೋ ಕಳುಹಿಸಿ ಕರ್ನಾಟಕದ ಚಿತ್ರದುರ್ಗದ ಜಿಲ್ಲೆಯವರಾದ ಜಲತಜ್ಞ ಡಾ||ದೇವರಾಜ್ ರೆಡ್ಡಿ ಪ್ರಥಮ ಸ್ಥಾನ ಪಡೆದಿದ್ದಾರೆ .

ಡಾ||ದೇವರಾಜ್ ರೆಡ್ಡಿರವರು ಕಳೆದ 30ವರ್ಷಗಳಿಂದ ಜಲ ಸಂಗ್ರಹ ಮತ್ತು ಮರುಬಳಕೆ ನೀರಿನ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ .
35000ಕ್ಕೂ ಹೆಚ್ಚು ಬೋರ್ ವೆಲ್ ಗಳು ಬತ್ತಿ ಹೋಗಿತ್ತು ,ಅದಕ್ಕೆ ವಿಶೇಷ ತಂತ್ರಜ್ಞಾನ ಆಳವಡಿಸಿ ಮಳೆ ನೀರು ಸಂಗ್ರಹ ಮೂಲಕ ಬತ್ತಿ ಹೋದ ಬೋರ್ ವೆಲ್ ಗಳಿಗೆ ಮರು ಜೀವ ನೀಡಲಾಗಿದೆ .ಕರ್ನಾಟಕ ,ಆಂಧ್ರಪ್ರದೇಶ ,ಗುಜರಾತ್ ,ಮಹಾರಾಷ್ಟ ,ತೆಲಂಗಾಣ ,ತಮಿಳುನಾಡು ವಿವಿಧ ರಾಜ್ಯಗಳಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೀರು ಮರುಬಳಕೆ ಮತ್ತು ಬೋರ್ ವೆಲ್ ಗಳಿಗೆ ಸದಾ ನೀರು ಸಿಗುವಂತೆ ಮಾಡಿದ್ದಾರೆ .
ಸಂರ್ಪಕ ಸಂಖ್ಯೆ.

ಡಾ||ದೇವರಾಜ್ ರೆಡ್ಡಿ
ಮೊಬೈಲ್ ನಂಬರ್ :9448125498

City Today News

(Tj vision media)

9341997936

Leave a comment